ಓಂ ಶ್ರೀ ಗುರುಭ್ಯೋ ನಮಃ
|| ಮಂಗಳಂ ||
ಮಂಗಳಂ ಜಯ ಮಂಗಳಂ
ಮಂಗಳಂ ಶುಭ ಮಂಗಳಂ ||
||ಪ ||
ಚಲಿಸುವ ಜಲದಲಿ ಮತ್ಸ್ಯನಿಗೆ
ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಹಾವತಾರಗೆ
ತರಳನ ಕಾಯ್ದ ಮುದ್ದು ನರಸಿಂಹಗೆ
|| ಮಂಗಳಂ ||
ಭೂಮಿಯ ದಾನವ ಬೇಡಿದಗೆ
ಆ ಮಹಾಕ್ಷತ್ರಿಯರ ಗೆಲಿದವಗೆ
ರಾಮ ಚಂದಿರನೆಂಬ ದಶರಥ ಸುತನಿಗೆ
ಸತ್ಯಭಾಮೆಯರರಸ ಗೋಪಾಲಕೃಷ್ಣಗೆ
|| ಮಂಗಳಂ ||
ಬೆತ್ತಲೆ ನಿಂತಿಹ ಬೌದ್ಧನಿಗೆ
ಉತ್ತಮ ಹಯವೇರಿದ ಕಲ್ಕ್ಯನಿಗೆ
ಹತ್ತವತಾರದಿ ಭಕ್ತರ ಸಲಹುವ
ಕರ್ತೃ ಶ್ರೀ ಪುರಂದರ ವಿಠ್ಠಲನಿಗೆ
|| ಮಂಗಳಂ ||
***
ಕಾಯೇನವಾಚ ಮನಸೇಂದ್ರಿಯ್ಯೆರ್ವಾ |
ಬುದ್ಧಿಯಾತ್ಮ ನಾ ವಾ ಪ್ರಕೃತೇ ಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮ್ಯೆ ||
ನಾರಾಯಣಾಯೇತಿ ಸಮರ್ಪಯಾಮಿ |
ನಾರಾಯಣಾಯೇತಿ ಸಮರ್ಪಯಾಮಿ |
ನಾರಾಯಣಾಯೇತಿ ಸಮರ್ಪಯಾಮಿ |