ದೇವರೆ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ ||
ನಿನ್ನೀ ಮಾಯೆಗೆ ಕೊನೆಯಿಲ್ಲ
ಈ ನಿನ್ನಾ ದಯೆಗೆ ಎಣೆಯಿಲ್ಲಾ ||
|| ದೇವರೆ ನೀನು ||
ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀನಾದೆ ||
ಮಾತಿನ ಚೇತನ ನಿನ್ನಿಂದಾ||
ಈ ಉಸಿರಲಿ ನೀನೇ ಆನಂದ ||
|| ದೇವರೆ ನೀನು ||
ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ ||
ಎಲ್ಲವೂ ನಿನ್ನದೆ ಈ ಲೀಲೆ ||
ಆ ದೇವರ ಕಂಡೆ ನಿನ್ನಲ್ಲೇ ||
|| ದೇವರೆ ನೀನು||
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ ||
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ ||
***