ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ
ಅನುದಿನವು ಭಕ್ತರು ನಿನ್ನ ನಂಬಿ ಇರುವರು ||
||ಪ||
ಗಜಮುಖದ ದೇವನೆ ನಿನಗೆ ವಂದನೆ ||
ಭಕ್ತಿಯ ಸೇವೆಯಲಿ ಆರಾಧನೆ ||
ಕಷ್ಟ ಪರಿಹಾರಕೆ ಮಾರ್ಗದರ್ಶಕ ||
ಕಾಪಾಡು ಕರುಣಾಳು ವಿಘ್ನನಾಶಕ ||
||ಶರವು ಮಹಾ ಗಣಪತಿ||
ಶರವು ಶಿವಾಲಯದ ತೆಂಕು ದಿಕ್ಕಿನಲ್ಲಿ ||
ದಿವ್ಯ ಮಹಾ ಗಣೇಶ ಅವತರಿಸಿದನಿಲ್ಲಿ ||
ನಿತ್ಯವೂ ಎಡೆಬಿಡದೆ ನಾವು ವಂದಿಸೆ ||
ಸಕಲ ಇಷ್ಟಾರ್ಥವ ಪರಿ ಪಾಲಿಸೋ ||
||ಶರವು ಮಹಾ ಗಣಪತಿ||
ಪುಣ್ಯ ಪ್ರಸಾದವೇ ಪಂಚಕಜ್ಜಾಯ
ಮುಕ್ತಿಯನ್ನು ನೀಡುವ ಭಕ್ತ ಜನಪ್ರಿಯ ||
ಸತ್ಯ ಧರ್ಮದಿ ತೋರೋ ನಿನ್ನ ಮಾಯೆಯ
ಶಾಸ್ತ್ರ ಸಂಪೂಜಿತ ಸಿದ್ಧಿ ವಿನಾಯಕ ||
|| ಶರವು ಮಹಾಗಣಪತಿ ||
***