ಅಮ್ಮ ನಿನ್ನ ಪಾದಕಮಲಕೆ ದುಂಬಿಯಾಗಿ ಎರಗುವೆ |
ಫಲ ಫುಷ್ಪವಾಗಿ ನಿನ್ನ ಪಾದ ಮೂಲ ಸೇರುವೆ || ಪ ||
ಭಕ್ತಿಎಂಬ ಜಲದಿ ಮಿಂದು ಆಸೆಗಳ ತೊರೆಯುವೆ |
ನೀನಿತ್ತ ಸಕಲವನ್ನೂ ನಿನಗೇ ನೀಡುವೆ ||
ನನ್ನದೆಂಬ ಮೋಹಪಾಶ ಬಂಧ ಹರಿಯೆನ್ನುವೆ |
ಬೇರೆ ಏನು ಬೇಡವು ಎನಗೆ ನಿನ್ನ ದಯವಾ ಬೇಡುವೆ |
||ಅಮ್ಮ ನಿನ್ನ||
ಸತ್ಯಮಾರ್ಗ ದಲ್ಲಿ ನಡೆವ ಬುದ್ದಿಯ ತೋರುವೆ |
ಸತ್ಯ ಧರ್ಮ ಕರ್ಮಗಳಲಿ ನಿರತನಾಗಿ ಬಾಳುವೆ ||
ದಿನವೆಲ್ಲ ನಿನ್ನ ನಾಮದ ಅಮೃತವನ್ನೇ ಸವಿಯುವೆ |
ನನ್ನನ್ನೇ ನಾನು ಮರೆತು ತೃಪ್ತನಾಗಿ ಬೇಡುವೆ ||
||ಅಮ್ಮ ನಿನ್ನ||
***