ಕೊಲ್ಲೂರ ಪುರವಾಸಿನಿ |
ಮೂಕಾಂಬಿಕೆ| ಎಲ್ಲರ ಪೊರೆ ಜನನಿ || ಪ ||
ಪುಲ್ಲಾಲೋಚನೆ ತಾಯೆ ಎಲ್ಲಾರು ಭಜಿಸುವ |
ಸಲ್ಲಿಸು ಮನದಿಷ್ಟ ಸರ್ವಮಂಗಳೆ ತಾಯೆ ||
|| ಕೊಲ್ಲೂರ ಪುರವಾಸಿನಿ ||
ನಿನ್ನ ನಂಬಿದ ಭಕ್ತರನ್ನು ಪೊರೆವೆ ನಿತ್ಯ
ಸನ್ನುತ ಚರಿತಳೆ ಎನ್ನಾ ರಕ್ಷಿಸು ತಾಯೆ ||
|| ಕೊಲ್ಲೂರ ಪುರವಾಸಿನಿ ||
ದುಷ್ಟರ ಮರ್ಧಿನಿ ಶಿಷ್ಟರ ಕಾಯೇನೀ |
ಸೃಷ್ಟಿಕರ್ತಳೆ ಬಂದ ಕಷ್ಟವ ಹರಿಸಮ್ಮ||
|| ಕೊಲ್ಲೂರ ಪುರವಾಸಿನಿ ||
ನಿನ್ನ ಕರುಣೆ ಸದಾ ಎನ್ನೋಳಡಕವಿರೆ |
ಇನ್ನಾವ ಭಯವಿದೆ ನಿನ್ನಾ ನಂಬಿದೆ ದೇವಿ||
|| ಕೊಲ್ಲೂರ ಪುರವಾಸಿನಿ ||
ದಿನದಿನ ಕ್ಷಣಕ್ಷಣ ಮನದಿ ನಿನ್ನಯ ಧ್ಯಾನ |
ಘನವಾಗಿರಲು ಸದಾ ಧನ್ಯನು ನಾ ತಾಯೆ ||
|| ಕೊಲ್ಲೂರ ಪುರವಾಸಿನಿ ||