ಓಂ ಓಂ ಅಯ್ಯಪ್ಪ |
ಓಂ ಗುರುನಾಥ ಅಯ್ಯಪ್ಪ ||
ಓಂ ಓಂ ಅಯ್ಯಪ್ಪ |
ಓಂ ಗುರುನಾಥ ಅಯ್ಯಪ್ಪ ||
||ಪ ||
ಹರಿ ಹರಿ ಶಿವ ಶಿವ ಅಯ್ಯಪ್ಪ |
ಶಿವ ಶಿವ ಹರಿ ಹರಿ ಅಯ್ಯಪ್ಪ ||
|| ಓಂ ಓಂ ||
ಆಶ್ರಯದಾಯಕ ಅಯ್ಯಪ್ಪ |
ಅದ್ಭುತರೂಪ ಅಯ್ಯಪ್ಪ ||
ತಂದೆ ತಾಯಿ ನೀನಪ್ಪಾ | ಕುಂದು ಕೊರತೆ ನೀಗಪ್ಪ ||
|| ಓಂ ಓಂ ||
ಅಭಯವ ನೀಡೋ ಅಯ್ಯಪ್ಪ |
ಅಂಜಲಿ ಮಾಡುವೆ ಅಯ್ಯಪ್ಪ ||
ಹರಿಹರ ಸುತನೆ ಅಯ್ಯಪ್ಪ |
ದಾಸನ ಕಡೆ ನೀ ನೋಡಪ್ಪ ||
|| ಓಂ ಓಂ ||
ಶಕ್ತಿಯ ರೂಪ ಅಯ್ಯಪ್ಪ |
ಸಕಲವೂ ನೀನೆ ಅಯ್ಯಪ್ಪ ||
ಸಾಸ್ತಾವು ಬೇಗ ಬಾರಪ್ಪ |
ಅಭಯವ ನಮಗೆ ನೀಡಪ್ಪ ||
|| ಓಂ ಓಂ ||
ಸೊಬಗಿನ ಸಿರಿಯೇ ಅಯ್ಯಪ್ಪ |
ಶುಭಕಾರಕನೇ ಅಯ್ಯಪ್ಪ ||
ಭಕ್ತಿಯ ಜ್ಯೋತಿಯು ನಿನಗಪ್ಪ|
ಅನುದಿನ ಕಾಯೋ ಅಯ್ಯಪ್ಪ ||
|| ಓಂ ಓಂ ||
ನಿನ್ನಯ ದರುಶನ ಅಯ್ಯಪ್ಪ |
ನಿತ್ಯವೂ ನೀಡೋ ಅಯ್ಯಪ್ಪ ||
ಪರಿತಾಪವನು ಅಳಿಸಪ್ಪ |
ನಿಶ್ಚಲ ತತ್ವವ ತಿಳಿಸಪ್ಪ ||
|| ಓಂ ಓಂ ||
***