ಕೈ ಮುಗಿವೆ ಮದವೂರ ಗಣನಾಥನೇ |
ಹೃದಯಾ ಸಚೇತಕ ವರದಾತನೇ ||ಪ ||
ಮಧುವಾಹಿನಿ ನದಿ ತೀರದಿ ಶೋಭಿಸುವವನೇ|
ಮೊದಲೊಂದಿಸಿ ನಿನ ಪಾದಕೆ ತಲೆಬಾಗುವೆನಯ್ಯ ||
ದಯೆತೋರು ದೇವಾ ಗಣೇಶ ||
||ಕೈ ಮುಗಿವೆ ||
ಎಲ್ಲಾ ವಿಘ್ನವ ಹೋಮಕುಂಡದಿ |
ಆಹುತಿ ಮಾಡಿ ನೀ ನಿಗ್ರಹಿಸೋ||
ಸಿದ್ಧಿ ಮಾಡಿ ಸಕಲ ಶುಭಕಾರ್ಯಗಳ |
ಗಣಗಳ ಒಡೆಯನೆ ಅನುಗ್ರಹಿಸೋ ||
||ಕೈ ಮುಗಿವೆ ||
ಜ್ಞಾನ ವೃದ್ಧಿಯನು ಮಾಡೋ |
ಜ್ಞಾನ ಸಿದ್ಧಿಯನು ನೀಡೋ||
ಸಿದ್ದಿವಿನಾಯಕ | ಬುದ್ದಿ ಪ್ರದಾಯಕಾ |
ಶಂಕರ ತನಯನೆ ದಯೆತೋರೋ ||
||ಕೈ ಮುಗಿವೆ ||
ಅಹೋರಾತ್ರಿ ಮನದಲ್ಲಿ ನಿನ್ನ ನಾಮ |
ತುಂಬಿರಲಿ ಅನುಕ್ಷಣ ನಿನ್ನ ನೇಮ ||
ಭಾವರಾಗ ಉಸಿರಲ್ಲಿ ಭಕ್ತಿಯ ಹೋಮ |
ಧನ್ಯತೆಯ ಮೂಡಿಸಲಿ ನಿನ್ನ ಪ್ರೇಮ ||
||ಕೈ ಮುಗಿವೆ ||
***