ಕದ್ರಿಯ ಕೊಳದಿಂದ ಜ್ಯೋತಿರ್ಲಿಂಗ ರೂಪದಿಂದ |
ಅಣ್ಣಪ್ಪನ ಹೆಗಲೇರಿದ ಮಂಜುನಾಥ |
ದರುಶನವ ನೀಡಯ್ಯಾ ಧರ್ಮದಾತ ||
ಮಂಜುನಾಥ ಸ್ವಾಮಿ ಮಂಜುನಾಥ ||ಪ ||
ಅಣ್ಣಪ್ಪನು ನಿಂತಿಹನು ರಕ್ಷಣೆಗಾಗಿ |
ಅನ್ನದಾನ ನಿತ್ಯವೂ ಭಕ್ತರಿಗಾಗಿ ||
ಅನುದಿನ ನಿನ್ನನು ಭಜಿಸುವೆ ತಲೆಬಾಗಿ |
ಅನ್ನಬ್ರಹ್ಮನೇ ಬಾರೋ ವರವಾಗಿ ||
||ಕದ್ರಿಯ ಕೊಳದಿಂದ ||
ಮಾತುಬಿಡಾ ಮಹಾ ಮಹಿಮ ಮಂಜುನಾಥ |
ಕಾಶಿಯಿಂದ ಬಂದ ಪರಮ ವಿಶ್ವನಾಥ ||
ಸೋಮವಾರ ಮಹಾಪೂಜೆ ನಿನಗೆ ಅರ್ಪಣೆ |
ಶಿವರಾತ್ರಿ ಉತ್ಸವದೀ ಬಿಲ್ವಾರ್ಚನೆ ||
||ಕದ್ರಿಯ ಕೊಳದಿಂದ ||
***