ಬುದ್ಧಿರ್ಬಲಂ ಯಶೋಧೈರ್ಯಂ |

ನಿರ್ಭಯತ್ವಮ್ ಅರೋಗತಾ ||

ಅಜಾಡ್ಯಮ್ ವಾಕ್ಪಟುತ್ವಮ್ ಚ |

ಹನೂಮತ್ ಸ್ಮರಣಾತ್ ಭವೇತ್ ||


ಜೈ ಜೈ ಹನುಮಾನ್ |

ಜೈಗುರು ಜೈ ಜೈ ಪವಮಾನ್ ||

ಜೈ ಜೈ ಹನುಮಾನ್ |

ಜೈಗುರು ಜೈ ಜೈ ಪವಮಾನ್ ||

ಪವನ ಪುತ್ರ ಹನುಮಾನ್ ಕಿ ಜೈ ||

||ಪ ||

ಆಂಜನೇಯ ಜೈ | ಬಲಭೀಮ ಜೈ |

(ಭಕ್ತವರತುಲಿತ) ಬಲಧಾಮ ಜೈ ||

ಹನುಮಂತ ಜೈ |

ಎಮ್ಮ ರಕ್ಷಿಸೋ ನೀ |

ರಾಮ ವಿರೋಧಿಗಳನು ಶಿಕ್ಷಿಸೋ ||

ಬುದ್ಧಿರ್ಬಲ ಧೈರ್ಯಗಳ ಕರುಣಿಸೋ |

ನಿರ್ಭಯತ್ವ ಆರೋಗ್ಯ ಕರುಣಿಸೋ ||

ವಾಕ್ಪಟುತ್ವ ಹರಿಸ್ಮರಣೆ ಕರುಣಿಸೋ|

ಶ್ರೀರಾಮ ದರುಶನ ಭಾಗ್ಯ ಕರುಣಿಸೋ ||

|| ಜೈ ಜೈ ಹನುಮಾನ್ ||

ರಾಮಸ್ಮರಣೆ ಕೊಡು | ರಾಮಸೇವೆಯ ಕೊಡು ||

ರಾಮಾಯಣದ ಕಥೆಯೊಳು ಬಂದು ಕೂಡೋ |

ದಾಸ ಕೇಶವನುತ ಮಾರುತಿ ಹನುಮ ||

ದಾಸಗ್ರೇಸರ ಜೈ ಬಲಭೀಮ ||

|| ಜೈ ಜೈ ಹನುಮಾನ್ ||


***