ವಂದೇ ಓಂಕಾರ ಚಾಮರಕರ್ಣನೇ ||
ಶಂಕರ ಸುತ ಶರಣು
ವಿನಾಯಕ ಮಂಗಳವರ ಶರಣು ||ಪ||
ಮಧೂರು ಗಣಪತಿ ಶರವು ಗಣಪತಿ
ಕುಂಭಾಶಿ ಗಣಪತಿ ಶರಣು ||
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ
ಗೋಕರ್ಣ ಗಣಪತಿ ಶರಣು ||
||ವಂದೇ||
ಸುಮುಖನೆ ಕಪಿಲನೆ ಏಕದಂತನೇ
ಶುಭವರ್ಣ ಗೌರಿಸುತನೇ ||
ನೀನಲ್ಲದೆ ಎನಗಾರು ಸಖರಿಲ್ಲವೋ
ಬಾಂದವರಿಲ್ಲವೋ
ಕಾಯುವರಿಲ್ಲವೋ ||
||ವಂದೇ||
ವಿಕಟನೇ ವಿಮಲನೇ
ಧೂಮ್ರವರ್ಣನೇ ಗಣನಾಥ ನಿನಗೆ ವಂದನೆ ||
ನಿನ್ನನೇ ಎಂದೆಂದು ಸ್ತುತಿ ಮಾಡುವೆ
ಹಾಡಿ ಕೊಂಡಾಡುವೆ ಪೂಜೆ ವೃತ ಮಾಡುವೆ ||
||ವಂದೇ||
***