ತಾಂಬೂಲ‌ಕಾಣಿಕೆ ತಂದೇ‌ ಮಂಜಾಂಬಿಕೆ ತಾಯೇ|

ಅರಸಿನ‌ಕುಂಕುಮ‌ ಹೂವಾ ತಂದೇ ದೇವಿ ಮಹಮಾಯೇ||ಪ||

ಶಬರಿಗಿರಿಯ ಮೇಲೇ ನೆಲೆಸಿದ ಭುವನೇಶ್ವರಿ ತಾಯೇ|

ಮನದಲಿ ಅಯ್ಯನ ಸ್ಮರಣೆಯ ಮಾಡುತ ಕುಳಿತ ಸುಂದರಿಯೇ||

llತಾಂಬೂಲ‌ಕಾಣಿಕೆ||

ಚಾಮುಂಡಿ‌ ಎಂದರು ನಿನ್ನ ಮಹಿಷಾಪುರದಲ್ಲಿ|

ಮೂಕಾಂಬಿಕೆ ಎಂದು ಕರೆದರು ಕೋಲಾಪುರದಲ್ಲಿ||

ಆಯುಧ ಹಿಡಿದ ರೂಪವ ತಳೆದು ಭಕ್ತರ ಕುಲವನ್ನು|

ಶ್ರೀ ಪದ ಪಂಕಜ ಧ್ಯಾನವ ಮಾಡಲು ಕೊಡುವೇ ವರವನ್ನು ||

||ತಾಂಬೂಲ‌ಕಾಣಿಕೆ||

ತಾಯೇ ನಿನ್ನ ರೂಪವ ಕಂಡೆ ನಂದಿನಿ ಕಟೀಲಲ್ಲಿ|

ಮಾಯೇ ನಿನ್ನ ಕಾಂತಿಯ ಕಂಡೇ ಮಲ್ಲದ ನೆಲದಲ್ಲಿ||

ಎಲ್ಲರ ಧರ್ಮವು ಸಮಾನ ಎಂದು ಸಾರುವ ಯೋಗಿನಿಯೇ|

ನ್ಯಾಯ ನೀತಿ ರಕ್ಷಿಸುವಂತ ಸತ್ಯ ಸ್ವರೂಪಿಣಿಯೇ||

||ತಾಂಬೂಲ‌ಕಾಣಿಕೆ||


***