ನಿನ್ನ ಚರಣ ಸೇವಾ ಭಾಗ್ಯ ನೀಡೋ |

ಅಯ್ಯಪ್ಪಾ | ನಿನ್ನಾ ಸೇವಾ ಭಾಗ್ಯವ ನೀಡೋ ||

||ಪ ||

ಮಂಗಳ ಮೂರುತಿ ಪಂದಳರಾಜಾ ||

ಪಾವನಧಾಮ ಪಾಪ ನಿವಾರಕ |

ಪಾಪನಿವಾರಕ ಅಯ್ಯಪ್ಪ ಸ್ವಾಮಿ ||

|| ನಿನ್ನ ಚರಣ ಸೇವಾ ||

ಕರುಣಾಸಾಗರ ಕರ್ಪೂರ ಪ್ರಿಯನೇ |

ಹರಿಹರಪುತ್ರನೇ ಕಲಿಯುಗವರದ |

ಕಲಿಯುಗವರದ ಅಯ್ಯಪ್ಪ ಸ್ವಾಮಿ ||

|| ನಿನ್ನ ಚರಣ ಸೇವಾ ||

ಅಖಿಲಾಂಡೇಶ್ವರ ಅಗಣಿತ ಗುಣನಿಧಿ |

ಶರಣಜನ ಪ್ರಿಯ ಸತ್ಯ ಸ್ವರೂಪ |

ಸತ್ಯಸ್ವರೂಪ ಅಯ್ಯಪ್ಪ ಸ್ವಾಮಿ ||3||

|| ನಿನ್ನ ಚರಣ ಸೇವಾ ||

***