ಬಾರಾ ಶ್ರೀ ಗಣಪತಿ|
ವಿದ್ಯಾ ವಾರಿಧಿ | ಬಾರಾ ಶ್ರೀ ಗಣಪತಿ ||ಪ ||
ಎನ್ನ ನಾಲಿಗೆ ತೊದಲನು ಬಿಡಿಸಿ |
ನಡೆಸು ನೀ .. ನುಡಿಸು ಬಾರಾ ||
|| ಬಾರಾ ||
ವೇದ ವ್ಯಾಸಗೆ ಭಾರತ ಬರೆದು |
ವೇದದೀ ವ್ಯಾಸನ ಸೋಲಿಸಿದವಗೆ ||
ವೇದಪುರುಷಗೆ ಗುರುವಾದವಗೆ |
ವಿಶ್ವೇಶ್ವರನ ಕುಮಾರ ಬಾರ || 1||
|| ಬಾರಾ ||
ಚಿನ್ಮಯ ರೂಪನೇ ನಲಿನಲಿ ಬಾರ |
ಮಂಗಳ ರೂಪನೇ ಕುಣಿ ಕುಣಿ ಬಾರ ||
ವಿಘ್ನೇಶ್ವರನೇ ಬಾರಾ |
ಈಶ್ವರ ಸುತನೇ ಬಾರಾ ಬಾರಾ ||
|| ಬಾರಾ ||
ಕುಲುಕುಲು ಕುಣಿಯುವ ಕೊರಳಿನ ಹಾರ |
ಕಿಣಿ ಕಿಣಿ ಕಿಣಿ ರೆಂಬ ಕಂಕಣ ರವದಿ ||
ಗಲು ಗಲು ಗಲುರೆಂಬ ಗೆಜ್ಜೆಯ ನಾದದಿ |
ನಾಟ್ಯವಾಡುತ ನಟರಾಜ ಸುತ ||3||
|| ಬಾರಾ ||
***