ಶ್ರೀ ಮಂಗಳಾದೇವಿ ನಿನಗೆ ಪ್ರಣಾಮ|

ನೀಡೆ ಅನುಗ್ರಹ ಭಕ್ತರ ವೃಂದಕೆ||

||ಪ||


ಸಕಲೋಪಚಾರದಿ ಭಕ್ತರು ಪೂಜಿಪರು|

ಸಕಲ ಸಂಪತು ನೀಡೆ ನಿರಂತರ||

ವೇದಾಂತರೂಪಿನಿ ಮಂಗಳ ಸ್ವರೂಪಿಣಿ|

ಸರ್ವವಂದಿತೆ ತ್ರಿಲೋಕ ಜನನಿ||

||ಶ್ರೀ ಮಂಗಳಾ ದೇವಿ||


ಶ್ರಾವಣ ಮಾಸದಿ ಪಂಚಾಮೃತ ಅಭಿಷೇಕ|

ಧನುರ್ಮಾಸದಲಿ ಪೂಜೆ ಪುರಸ್ಕಾರ||

ಆಶ್ವೀಜ ಮಾಸದಿ ನವರಾತ್ರಿ ವೈಭವ |

ವಿಜಯ ದಶಮಿಯಂದೇ ಮಹಾರಥೋತ್ಸವ ||

||ಶ್ರೀ ಮಂಗಳಾ ದೇವಿ||