ಶ್ರೀ ಶಾರದಾಂಬೆ ಪೂಜಿಪೆ ನಿನ್ನ|
ಪೂಜಿಪೆ ನಿನ್ನ ಹೂಗಳಿಂದಲೀ ||
|| ಶ್ರೀ ||
ಅರಸಿನ ಕುಂಕುಮದಿಂದ |
ಪರಿಮಳ ಗಂಧದಿ ನಿನ್ನ ||
ಶಾರದೆಯೇ ಭಾರತಿಯೇ |
ಆರಾದಿಪೆ ನಾ ಹರುಷದಿಂದ ||
|| ಶ್ರೀ ||
ಮಲ್ಲೆ ಮಲ್ಲಿಗೆ ಕುಸುಮದಿಂದಾ |
ಕಲ್ಯಾಣಿ ಪೂಜಿಪೆ ನಿನ್ನಾ ||
ಸುರ ಸೇವಿತಾ ಜಲಜಾತನ |
ವಲ್ಲಭೆಯೇ ಪಾಲಿಸೆನ್ನ ||
|| ಶ್ರೀ ||
ಅಂಬುಜಜಾತನ ರಾಣಿ |
ಸುಬುದ್ದಿಯ ನೀಡಮ್ಮ ವಾಣಿ ||
ಗಂಭೀರೆಯೇ ನಿನ್ನ ನಂಬಿರುವೆ|
ಜಗದಾಂಬ ನಿನ್ನ ನಂಬಿರುವೆ ||
|| ಶ್ರೀ ||
***