ಎಂಥ ಅಂದ ಎಂಥ ಚಂದ ಶಾರದಮ್ಮ |

ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ||

|| ಪ ||

ಇನ್ನು ಇನ್ನು ನೋಡುವಾಸೆ ತುಂಬಿತಮ್ಮ|

ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ||

ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ|

ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ||

|| ಎಂಥ ಅಂದ ಎಂಥ ಚಂದ ||


ಎಂಥ ಶಕ್ತಿ ನಿನ್ನಲಿದೆಯೊ ಶಾರದಮ್ಮ|

ನಿನ್ನ ನೋಡಿ ಹಾಡುವಾಸೆ ನನಗೆ ಬಂದಿತಮ್ಮ ||

ರತ್ನದಂತ ಮಾತುಗಳನೆ ಹಾಡಿಸಮ್ಮ|

ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ||

|| ಎಂಥ ಅಂದ ಎಂಥ ಚಂದ ||


ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ|

ಬೇಗ ಬಂದು ನೆಲೆಸು ಇಲ್ಲಿ ಶಾರದಮ್ಮ||

ಬೇರೆ ಏನು ಬೇಕು ಎಂದು ಕೇಳೆನಮ್ಮ|

ನಿನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ||