ಚಿಂತ್ಯಾಕೆ ಮಾಡುತಿದ್ದಿ ಭೈರವನಿದ್ದಾನೆ |
ಭೈರವನಿದ್ದಾನೆ |
ನಿನ್ನ ಚಿಂತೆಯ ಬಿಡಿಸೋ ಗೌರಿಕಾಂತನಿದ್ದಾನೆ |
ಗೌರಿಕಾಂತನಿದ್ದಾನೆ||
||ಚಿಂತ್ಯಾಕೆ||
ಎಳ್ಳು ಕೊನೆಯೂ ಮುಳ್ಳು ಮೊನೆಯು |
ಎಲ್ಲಾ ಬಿಡದೆ ಒಳಗೆ ಹೊರಗೆ ||
ಎಲ್ಲಾ ಠಾವಿನಲ್ಲೂ ಗೌರಿವಲ್ಲಭನಿದ್ದಾನೆ|
ಗೌರಿವಲ್ಲಭನಿದ್ದಾನೆ||
||ಚಿಂತ್ಯಾಕೆ||
ಹಿಂದೆ ನಿನ್ನ ಸಲಹಿದರ್ಯಾರೋ |
ಮುಂದೆ ನಿನ್ನ ಸಲಹುವರ್ಯಾರೋ ||
ಅಂದಿಂದೆಂದಿಗೂ ನಂದಿವಾಹನನಿದ್ದಾನೆ|
ನಂದಿವಾಹನನಿದ್ದಾನೆ||
||ಚಿಂತ್ಯಾಕೆ||
ನಾನು ನೀನು ಎಂಬ ಉಭಯ |
ಹೀನಗುಣಗಳೆಲ್ಲಾ ಕಳೆದೂ||
ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ |
ಸುಖ ಸಂಪೂರ್ಣನಿದ್ದಾನೆ|| `
||ಚಿಂತ್ಯಾಕೆ||
ಗೌರಿಕಾಂತನಿದ್ದಾನೆ|
ಗೌರಿವಲ್ಲಭನಿದ್ದಾನೆ|
ನಂದಿವಾಹನನಿದ್ದಾನೆ|
ಸುಖ ಸಂಪೂರ್ಣನಿದ್ದಾನೆ|
ಸ್ವಾಮಿ ಭೈರವನಿದ್ದಾನೆ ||