ಪವಡಿಸು ಪರಮಾತ್ಮ ಶ್ರೀ ವೆಂಕಟೇಶ

ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ …. ||ಪ||

ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ

ಅನಸೂಯೆ ಜೋಗುಳವ ಹಾಡಿ ನಲಿದ ರೀತಿ ||

ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ ….

ಧನ್ಯನಾಗುವೆನಿಂದು ಕರುಣಿಸೋ ….ದಯಮಾಡಿ ..

||ಪವಡಿಸು ಪರಮಾತ್ಮ ||

ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ ..

ಅನುಗಾಲ ಈ ಸೇವೆ ಸಾಗುತಲೇ ಇರಲಿ .. ||

ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ …

ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ …||

||ಪವಡಿಸು ಪರಮಾತ್ಮ ||

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ

ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..

ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….

ಶ್ರೀ ವೆಂಕಟೇಶ …. ಸಪ್ತ ಗಿರಿವಾಸ ….


***