ಚೆಲ್ಲಿದರು ಮಲ್ಲಿಗೆಯಾ |

ಅಯ್ಯಪ್ಪನ ಗಿರಿಯ ಮೇಲೆ ||

ಅಂದುಳ್ಳ ಚಂದುಳ್ಳ ಮಾಯ್ಕಾರ ಅಯ್ಯಪ್ಪಗೆ |

ಚೆಲ್ಲಿದರು ಮಲ್ಲಿಗೆಯ ||

||ಚೆಲ್ಲಿದರು ಮಲ್ಲಿಗೆಯ||

ಬೆಟ್ಟ ಗುಡ್ಡವ  ಬಳಸಿ 

ಬರುವಾಗ ಅಯ್ಯಪ್ಪ ||

ಬೆಟ್ಟ ಗುಡ್ಡಗಳ ಏರುವಾಗ

ಚೆಲ್ಲಿದರು ಮಲ್ಲಿಗೆಯ ||   

||ಚೆಲ್ಲಿದರು ಮಲ್ಲಿಗೆಯ||

ಕಲ್ಲು ಮುಳ್ಳನು ತುಳಿದು 

ಬರುವಾಗ ಅಯ್ಯಪ್ಪ ||

ಕಲ್ಲು ಮುಳ್ಳನ್ನು ತುಳಿವಾಗ 

ಚೆಲ್ಲಿದರು ಮಲ್ಲಿಗೆಯ ||  

||ಚೆಲ್ಲಿದರು ಮಲ್ಲಿಗೆಯ||

ಹದಿನೆಂಟು ಮೆಟ್ಟಿಲೇರಿ

ಬರುವಾಗ ಅಯ್ಯಪ್ಪ  ||  

ಹದಿನೆಂಟು ಮೆಟ್ಟಿಲನು ಏರುವಾಗ

ಚೆಲ್ಲಿದರು ಮಲ್ಲಿಗೆಯ ||   

||ಚೆಲ್ಲಿದರು ಮಲ್ಲಿಗೆಯ||


***