ಭಜನೆಗೆ ಪ್ರಾರಂಭ ಮಾಡೋಣ ||

ರಾಮ ರಾಮ ರಾಮ ರಾಮ್ |

ಶ್ರೀ ರಾಮ ರಾಮ ರಾಮ ರಾಮ್ ||ಪ ||

ರಾಮ ಭಜನೆಗೆ ನಿಂತಾಗ |

ಮಾಡಬೇಕು ಲಜ್ಜಾತ್ಯಾಗ ||

|| ಭಜನೆಗೆ ||

ಲಕ್ಷ್ಯ ಬೇಡಾ ರಾಗದ ಕಡೆಗೇ |

ಪ್ರೇಮವು ತುಂಬಲಿ ಹೃದಯದ ಒಳಗೆ ||

||ಭಜನೆಗೆ ||

ರಾಗ ತಾಳ ಹೇಗೇ ಇರಲಿ |

ರಾಮ ನಾಮವು ಬಾಯಿಗೆ ಬರಲಿ ||

||ಭಜನೆಗೆ ||

ರಾಮ ರಾಮ ರಾಮ ಸೀತಾ ರಾಮ ರಾಮ ರಾಮ್ |

ಶ್ರೀ ರಾಮ ರಾಮ ರಾಮ ಸೀತಾ ರಾಮ ರಾಮ ರಾಮ್ ||

***