ಓ ಗಣನಾಯಕಾ |

ಬಾ ವಿಘ್ನೇಶ್ವರಾ ||

ಮಣಿವೇನಯ್ಯಾ ನಿನಗೆ ಶಿರಬಾಗಿ |

ಕಾಣಿಸಯ್ಯ ಎಮಗೆ ಸರಿದಾರಿ||

||ಓ ||

ಮದವೂರ ಪುರವಾಸ ಗಣನಾಯಕಾ |

ಮೊದಲಾಗಿ ನಿನಪಾದಕಿದು ವಂದನೆ ||

ವಿಘ್ನೇಶ್ವರಾ... ||

ವಿಘ್ನಗಳನು ನಾಶಮಾಡು ಗಣನಾಯಕಾ ||

||ಓ ||

ಭಕ್ತವೃಂದವು ನಿನಗೆ ಭಕ್ತಿಯಿಂದ |

ಮುತ್ತಿನಾರತಿ ಎತ್ತಿ ಶಿರಬಾಗಿದೆ ||

ಮುಕ್ತಿಪಥಾ... ||

ಮುಕ್ತಿಪಥವ ತೋರೊ ಗಣನಾಯಕಾ ||

|| ಓ ||

ಶರಧಿ ಮಧ್ಯದಿ ಬಿದ್ದು ದಡ ಕಾಣದೆ |

ಶರವು ಶ್ರೀ ಗಣನಾಥ | ಬಹು ಬಳಲಿದೆ ||

ಸರಿದಾರಿಯ.. |

ಸರಿದಾರಿಯನು ತೋರೊ ಗಣನಾಯಕಾ ||

|| ಓ ||

***