ಸ್ವಾಮಿಯೇ ಶರಣು ಅಯ್ಯಪ್ಪ..
ಅಯ್ಯನೇ ಶರಣು ಅಯ್ಯಪ್ಪ....
ಮಾಲೆಯ ಕೊರಳಲಿಟ್ಟು..
ವೃತ ನಿಯಮದ ಮುಡಿಯುಟ್ಟು..
ಗಿರಿ ಕಂದರವ ದಾಟಿದೆವು..
ಅಯ್ಯನ ಕಾಣಲು || ಸ್ವಾಮಿಯೆ |
ಹೊಸಮಲೆ ಹೊನ್ನುಮಲೆ ಪುಣ್ಯಮಲೆ ಶಬರಿಮಲೆ |
ಮಣಿಕಂಠನಿರುವ ಮಲೆ
ಭಕ್ತರು ಶತಕೋಟಿ ಬರುವಾಗ
ಮುಕ್ತಿಯ ಪಥತೋರಿ ಶರಣು ಎನ್ನುವ ಮಲೆ
ಸ್ವಾಮಿ ಶರಣು ಎನ್ನುವ ಮಲೆ ||
ನನ್ನಯ್ಯ ಜಗದಯ್ಯ ನನ್ನಯ್ಯ ಅಯ್ಯಪ್ಪನೇ |
ಶರಣು ಶರಣು ಶರಣು ಶರಣು ಸ್ವಾಮಿಯೆ ||
||ಹೊಸಮಲೆ ||
ಜಗದೀಶನಾ ಮಗನೇ ಕಲಿಕಾಲ ಕಂಡವನೇ
ಪಂಪಾನದಿ ತೀರದಿ ಜನಿಸಿದ ಅಯ್ಯನಯ್ಯನೇ ||
ಹರಿಹರ ನಂದನನೇ
ಭುವಿಗೆ ನೀ ಬಂದವನೇ
ಹೊಸ ಯುಗವ ನೀನು ತಂದೆಯಲ್ಲೋ ||
||ನನ್ನಯ್ಯ ಜಗದಯ್ಯ||
ಧನಸ್ಸಿನ ವೀರನಾಗಿ ವೀರಮಣಿಕಂಠನಾಗಿ
ಹುಲಿವಾಹನನಾಗಿ
ಸ್ವಾಮಿ ಮಹಿಷಿಮರ್ಧನನಾಗಿ ||
ಏಳುಮಲೆ ಏರಿದೆಯ ಶಬರಿಮಲೆ ಸೇರಿದೆಯ
ಭಕ್ತರ ಮನದಲ್ಲಿ ನೆಲೆಸಿದೆಯ||
|| ನನ್ನಯ್ಯ ಜಗದಯ್ಯ ||
ಬಲು ಕಟ್ಟುನಿಟ್ಟಾಗಿ ಬಂದೆವು
ಕರಿಮಲೆ ನೀಲಿಮಲೆ ಏರುತ್ತ ಬಂದೆವು
ಹದಿನೆಂಟು ಹಂತಗಳ ಹತ್ತುತ್ತಾ ಬಂದೆವು
ಶರಣೆಂದು ಹೇಳಿ ಹಾಡುತ ಬಂದೆವು ||
ಮೋಕ್ಷ ಕೊಡು ಮುಕ್ತಿ ಕೊಡು
ಸ್ಮರಿಸುವ ಶಕ್ತಿ ಕೊಡು
ಸ್ವಾಮಿ ಭಕ್ತರಿಗೆ ಅಭಯ ನೀಡು ||
|| ನನ್ನಯ್ಯ ಜಗದಯ್ಯ ||
***