ಹಾಡುತಿಹಳು ನೇತ್ರಾವತಿ ಕೇಳಿ ಬನ್ನಿ |

ಮಂಜುನಾಥ ದೇವನಿಗೆ ಜಯಜಯವೆನ್ನಿ || || ಪ ||

ಭಕ್ತಿಯಿಂದ ಹರಕೆ ಹೊತ್ತು ಕಾಣಿಕೆ ತನ್ನಿ |

ನೀತಿಯಿಂದ ನಡೆದು ಸುಕೃತ ಫಲವ ತಿನ್ನಿ||

|| ಹಾಡುತಿಹಳು ನೇತ್ರಾವತಿ ||

ಮಂಜುನಾಥನರಿಯದ ಮರ್ಮವಿಲ್ಲ |

ಮಂಜುನಾಥ ಮಾಡದ ಧರ್ಮವಿಲ್ಲ ||

ಅನ್ನದಾತ ಬುದ್ದಿದಾತ ಮಂಜುನಾಥ |

ಕಷ್ಟದಲ್ಲಿ ಬಂದು ಕೈಯ ಹಿಡಿಯುವಾತ||

|| ಹಾಡುತಿಹಳು ನೇತ್ರಾವತಿ ||

ಇಲ್ಲಿ ಬಂದು ಧನ್ಯಳಾದೆ ಎನುವುದೀ ನದಿ

ಕಲಿಯ ದೋಷ ನೀಗಿದೆ ಶಿವನ ಸನ್ನಿಧಿ

ದಯೆಯು ಧರ್ಮ ಸತ್ಯವೇ ಇಲ್ಲಿ ತಳಹದಿ

ಭಕ್ತಿ ಜ್ಯೋತಿ ತೋರಿದೆ ಬಾಳ ನವನಿಧಿ

|| ಹಾಡುತಿಹಳು ನೇತ್ರಾವತಿ ||