ಕುಣಿಯುತ ನಲಿಯುತ ಬಾರ ಗಣೇಶ

ಕುಣಿಯುತ ನಲಿಯುತ ಬಾ || ಪ ||

ಮೂಷಿಕ ವಾಹನ ಮೋದಕ ಪ್ರಿಯನೇ ||

ಮಹಾಮಾಯೆಯ ಮೋಹದ ಸುತನೇ ||

 ||ಕುಣಿಯುತ||

ವಿಧ್ಯಾಧಿಪನೇ ವಿಮಲಚರಿತನೇ 

ವಿಘ್ನ ನಿವಾರಕ ವೀರನೇ ಧೀರನೇ ||

ವಿಶ್ವೇಶ್ವರಗೇ ವಂದಿಸಿ ಗೆಲಿದವನೇ || 

||ಕುಣಿಯುತ ||

ತಾಳವ ಹಿಡಿದು ತಂಬೂರಿಯ ಮಿಡಿದು 

ವೀಣೆಯ ನುಡಿಸಿ ನೂಪುರ ಧರಿಸಿ ||

ಧಿಮಿಕಿಟಧಿಮಿ ಎಂದು ಕುಣಿಕುಣಿ ಬಾರ||

|| ಕುಣಿಯುತ||