ವೆಂಕಟೇಶನೆ ಶ್ರೀನಿವಾಸನೆ

ಸಪ್ತಗಿರಿಯಲ್ಲಿ ಆಳುವಂತವನೆ ||

ಪರಮಾತ್ಮ ದೇವ ಪುರುಷೋತ್ತಮ

ಪದ್ಮಾವತೀಶ ಸರ್ವೋತ್ತಮ |

ಗರುಡಾದ್ರಿಯಲ್ಲಿ ನಿಜಧಾಮನೆ

ಗೋವಿಂದಾನೀ ತೋರೋ ಪ್ರೇಮ||

|| ವೆಂಕಟೇಶನೆ||

ಬೆಟ್ಟ ಹತ್ತಿ ಬಂದೆ ನಿನ್ನ ಸೇವಿಸೆ

ಸನ್ನಿಧಾನದೇ ನಿನ್ನಪೂಜಿಸೆ |

ಆಕಾಶದೆ ಪ್ರತಿಧ್ವನಿಸಿದೇ

ಪ್ರಭು ನಿನ್ನ ನಾಮ ಭಕ್ತಕಂಠದೇ|

ಅಲಮೇಲುಮಂಗ ಪ್ರಿಯಲೋಲನೇ

ಆಚಂದ್ರಾರ್ಕ ಕೀರ್ತಿವಂತನೇ||

|| ವೆಂಕಟೇಶನೆ||

***