ಶಾರದಾಂಬೆಯೆ ನಿನ್ನಡಿಗಳಿಗೆರಗುತ

ಶಿರವನೆ ಭಾಗ್ವೆವು ನಾವಿಂದು|| ಪ||


ಸ್ತುತಿಪೆವು ಸರಸ್ವತಿ ವಿಖ್ಯಾತೆ|

ನೀತಿಯ ತೋರೋ ಜಗನ್ಮಾತೆ||

ಮತಿವಂತರೆಂದೆಮ್ಮ ಮಾಡವ್ವ|

ಜತನದಿ ವಿದ್ಯೆಯ ನೀಡವ್ವ||

|| ಶಾರದಾಂಬೆಯೆ ||


ಸರಸಿಜ ಭವ ಸತಿ ಶಾರದೆಯೆ|

ಕರುಣದಿ ಪಾಲಿಸು ಹೆ ಮಾತೇ||

ಪರಮೇಶ್ಟಿ ದೇವನ ಪರಮ ಪ್ರಿಯಳೆ ನೀ|

ಚರಣವ ನುತಿಪೆವು ಓಂ ಜನನಿ||

|| ಶಾರದಾಂಬೆಯೆ ||


ಅತಿಶಯ ಮಹಿಮಳು ನೀನೆಂದು|

ಮತಿಯುತರೆಲ್ಲರು ಹೊಗಳುವರು||

ಪ್ರತಿದಿನದಲಿ ನಿನ್ನ ಪ್ರಾರ್ಥಿಪೆವೈ |

ಸುತರೆಲ್ಲರನು ನೀ ಕಾಯೈ||

|| ಶಾರದಾಂಬೆಯೆ ||