ಆರತಿ ಶುಭದಾರತಿ

 ಶ್ರೀಲಕ್ಷ್ಮಿಗೆ ಶುಭದಾರತಿ ||

ಕ್ಷೀರಸಾಗರ ದಲ್ಲಿ ಮಲಗಿದ 

ಹರಿಯ ಹೃದಯದ ರಾಣಿಗೆ ||

ಕಮಲನಯನೆ ಕಮಲಮುಖಿಯೆ

 ಕಮಲನಾಭನ ಅರಸಿಗೆ ||

ಆರತಿ ಶುಭದಾರತಿ ಶ್ರೀಲಕ್ಷ್ಮಿಗೆ ಶುಭದಾರತಿ||


ಆರತಿ ಶುಭದಾರತಿ 

ಅಂಬಿಕೆಗೆ ಶುಭದಾರತಿ ||

ನಾಗಭೂಷಣ ಚಂದ್ರಚೂಡನ

ಹರನ ಹೃದಯದ ರಾಣಿಗೆ ||

ಭಸ್ಮಧಾರಿಯ ಮೂರು ಕಣ್ಣನು

ಪಡೆದ ಶಿವನ ಅರಸಿಗೆ ||

ಆರತಿ ಶುಭದಾರತಿ ಅಂಬಿಕೆಗೆ ಶುಭದಾರತಿ ||


ಆರತಿ ಶುಭದಾರತಿ ಶಾರದೆಗೆ ಶುಭದಾರತಿ ||

ಹರಿಯಸುತನ ಸೃಷ್ಟಿಕರ್ತನ

 ಬ್ರಹ್ಮನ ಮಹಾರಾಣಿಗೆ ||

ವಿದ್ಯಾದೇವತೆ ಸರಸ್ವತಿಗೆ

ವೀಣಾಪಾಣಿಗೆ ವಾಣಿಗೆ ||

ಆರತಿ ಶುಭದಾರತಿ ಶಾರದೆಗೆ ಶುಭದಾರತಿ |

ಆರತಿ ಶುಭದಾರತಿ ಶ್ರೀಲಕ್ಷ್ಮಿಗೆ ಶುಭದಾರತಿ |

ಆರತಿ ಶುಭದಾರತಿ ಅಂಬಿಕೆಗೆ ಶುಭದಾರತಿ |