ವೆಂಕಟರಮಣನೆ ಬಾರೋ
ಶೇಷಾಚಲವಾಸನೆ ಬಾರೋ|| ಪ||
ಪಂಕಜನಾಭ ಪರಮ ಪವಿತ್ರ
ಶಂಕರ ಮಿತ್ರನೇ ಬಾರೋ ||
|| ವೆಂಕಟರಮಣನೆ ಬಾರೋ ||
ಮುದ್ದು ಮುಖದ ಮಗುವೇ
ನಿನಗೆ ಮುದ್ದು ಕೊಡುವೆನು ಬಾರೋ|
ನಿರ್ದಯವೇಕೋ ನಿನ್ನೊಳಗೆ ನಾನು
ಹೊಂದಿದ್ದೇನೊ ಬಾರೊ||
|| ವೆಂಕಟರಮಣನೆ ಬಾರೋ ||
ಮಂದರಗಿರಿಯನು ಎತ್ತಿದಾನಂದ
ಮೂರುತಿಯೇ ನೀ ಬಾರೋ|
ನಂದನ ಕಂದ ಗೋವಿಂದ ಮುಕುಂದನೇ
ಇಂದಿರೆಯರಸನೆ ಬಾರೋ||
|| ವೆಂಕಟರಮಣನೆ ಬಾರೋ ||
ಕಾಮನಯ್ಯ ಕರುಣಾಳು
ಶಾಮಲವರ್ಣನೇ ಬಾರೋ|
ಕೋಮಲಾಂಗ ಶ್ರೀ ಪುರಂದರ ವಿಠ್ಠಲನೇ
ಸ್ವಾಮಿ ರಾಮನೇ ಬಾರೋ ||
|| ವೆಂಕಟರಮಣನೆ ಬಾರೋ ||
***