ಕದ್ರಿಯಿಂದ ಬಂದವನು ಮಂಜುನಾಥನು |
ಧರ್ಮಸ್ಥಳ ಕ್ಷೇತ್ರದಲ್ಲಿ ಅನ್ನದಾತನು | ಇವನು ಅನ್ನದಾತನು
||ಪ||
ಧರ್ಮದ ರಕ್ಷಣೆ ಮಾಡುತ ನಿಂತನು ಅಣ್ಣಪ್ಪನು |
ಕ್ಷೇತ್ರದ ವೈಭವ ನೋಡುತ ನಿಂತನು ಗೊಮ್ಮಟೇಶನು||
||ಕದ್ರಿಯಿಂದ ||
ಪರಶುರಾಮ ಕ್ಷೇತ್ರದಲ್ಲಿ ಮಾತ್ರವಲ್ಲದೇ |
ಈ ಪರಶಿವನು ಮೆರೆದಿಹನು ಸರ್ವ ಕ್ಷೇತ್ರದಿ ||
ಮಾತನು ಬಿಡನು ಶ್ರೀ ಮಂಜುನಾಥನು |
ಹರಕೆ ಹೊತ್ತು ಸೇವೆ ಮಾಡಿ ಮಹಾಮಹಿಮನ ||
|| ಧರ್ಮದ ರಕ್ಷಣೆ ||
ಆಣೆಮಾತು ಪರಿಹಾರ ಮಾತ್ರವಲ್ಲದೇ |
ಹೆಗ್ಗಡೆಯ ಮಾತಿನಲ್ಲಿ ದಿವ್ಯಶಕ್ತಿಯು ||
ಅನ್ನ ನೀಡಿದಾ ವಸ್ತ್ರ ಕೊಡಿಸಿದ |
ವಿದ್ಯೆಯನು ಕರುಣಿಸುತ ಬುದ್ದಿ ನೀಡಿದ ||
|| ಧರ್ಮದ ರಕ್ಷಣೆ ||
***