ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ |
ಶರಣು ಶರಣು ಶಿವೆ ಗೌರಿ
ರಕ್ಷಿಸೆಮ್ಮ ಸುಖದಾತೆ ||
|| ಶರಣು ಶರಣು ಜಯ ದುರ್ಗೆ ||
ಮಂಗಳವಾರ ಸುಮಂಗಲಿಯರು
ನಿನ್ನಯ ನಾಮವ ಭಜಿಸಿರಲು |
ಒಂಭತ್ತು ವಾರ ವೃತವಿರಲು
ದೊರಕುವುದು ಇಷ್ಟಾರ್ಥಗಳು ||
|| ಶರಣು ಶರಣು ಜಯ ದುರ್ಗೆ ||
ರಕ್ಷಿಸುವವಳು ನೀನೇ
ಶಿಕ್ಷಿಸುವವಳು ನೀನೇ |
ಅಣು ಅಣುವೆಲ್ಲಾ ತುಂಬಿಹೆ ನೀನೇ
ಕೋರಿಕೆ ಕರುಣಿಸು ಕಾಮಧೇನು ||
|| ಶರಣು ಶರಣು ಜಯ ದುರ್ಗೆ ||
ಜಯ ಶಿವೆ ಶಂಕರಿ ಜಯ ಅಭಯಂಕರಿ
ಜಯ ಜಯ ಶಕ್ತಿ ಜಯ ಪ್ರಳಯಂಕರಿ ||
ಜಯ ಶಿವೆ ಶಾಂಭವಿ ಜಯ ನಟ ಭೈರವಿ
ಜಯ ಕಾದಂಬರಿ ಜಯ ಶ್ವೇತಾಂಬರಿ ||
|| ಶರಣು ಶರಣು ಜಯ ದುರ್ಗೆ ||
ಜಯ ಮಾತಂಗಿನಿ ಆನಂದದಾಯಿನಿ
ಜಯ ಜಗದಂಬೆ ಪುಣ್ಯ ಸ್ವರೂಪಿಣಿ ||
ಓಂ ಜಗಜನನಿ ಮಾತಾಭವಾನಿ
ಓಂಕಾರೇಶ್ವರ ಚಿತ್ತ ನಿವಾಸಿನಿ ||
|| ಶರಣು ಶರಣು ಜಯ ದುರ್ಗೆ ||