ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ

ಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ  

।।ಪ||

ಪೂಜೆ ನಡೆವ ಮನೆಗಳೇ ಎಂದೂ ಪರಮಪಾವನ

ಧ್ಯಾನಗೈವ ಮನಗಳೇ ನಿನ್ನಾ ಬೃಂದಾವನ||

ನಿನ್ನ ಅರಿತ ಹೃದಯವೇ ದೇವನಿರುವ ಮಂದಿರ||

ನಿನ್ನ ಬೆರೆವ ಭಾವವೇ ನಿತ್ಯ ಸತ್ಯ ಸುಂದರ   ।।    

।।ಎಲ್ಲಿ ನಿನ್ನ ಭಕ್ತರೋ||

ನಿನ್ನ ಕಾಣುವಾಸೆಯೇ ಪೂರ್ವ ಜನ್ಮ ಪುಣ್ಯವು

ನಿನ್ನ ನಂಬಿ ನಡೆವುದೇ ಬಾಳಿನಲ್ಲಿ ಭಾಗ್ಯವು||

ನಿನ್ನ ನಾಮಸ್ಮರಣೆಯೇ ದಿವ್ಯ ವೇದ ಮಂತ್ರವು||

ನಿತ್ಯ ನಿನ್ನ ಸೇವೆಯೇ ಮುಕ್ತಿ ಪಡೆವ ತಂತ್ರವು    ।।    

।।ಎಲ್ಲಿ ನಿನ್ನ ಭಕ್ತರೋ||

***